ಸ್ಪರ್ಧೆಗಾಗಿ
ಸ್ನೇಹದ ಕಡಲಲ್ಲಿ
ತಾಯ ತ್ಯಾಗ ಮಮತೆಯ ನೆನಪ
ಮೂಡಿಸಿತು ಮನದಲ್ಲಿ ನಿನ್ನ ಸ್ನೇಹ
ಹಂಚಿಕೊಂಡೆವು ನಾವು
ನೋವು ನಲಿವುಗಳನ್ನು
ಬಂಧನದ ಭಯವಿಲ್ಲ
ಕಲ್ಮಷದ ಸೋಂಕಿಲ್ಲ
ಮೇಲು ಕೀಳುಗಳ ಭೇದವಿಲ್ಲ
ಸ್ವಾರ್ಥ ವಿಲ್ಲದ ಶುದ್ಧ ಸ್ನೇಹ
ಸ್ನೇಹದ ಕಡಲಲ್ಲಿ ಮುಳುಗಿ
ಮರೆತೆವಲ್ಲಾ ಜಗವ ನಂದು
ಜಗದ ಜಂಜಾಟಗಳಮೋಹ
ನೋವ ಮರೆಸುವ ಸ್ನೇಹ
ಬಾಳ ಪಯಣದಲಿ ಇರಬೇಕು
ಶುದ್ಧ ಸ್ನೇಹದ ಜಲವನೆರೆವ ಸ್ನೇಹಿತ
ಮನಸೆಲ್ಲ ಹೂವಾಗಿಕನಸೆಲ್ಲ ನನಸಾಗಿ
ಸಾಗುತಿದೆ ಈ ಜೀವಸ್ನೇಹದ ಕಡಲಲ್ಲಿ
ಹಂಚಿಕೊಂಡೆವು ದಿನ ದಿನವೂ
ನೋವು ನಲಿವುಗಳನ್ನು
ಜತೆಯಾಗಿ ಕೂಡಿ ಆಡಿದೆವು
ಹೆಣ್ಣುಗಂಡುಎಂಬಭೇದವಿಲ್ಲದೆ
ಜಗವು ನೋಡಿತು ಅರಸಿನದ ಕಣ್ಣಿಂದ
ಶುದ್ಧ ಸ್ನೇಹದ ಜಲಕೆ ಹುಳಿಯ ನಿಂಡಿದರು
ಬಾಲ್ಯದಲ್ಲಿ ಇಲ್ಲದ ಹೆಣ್ಣುಗಂಡು
ಎಂಬ ಭೇಧ ಈಗೇಕೆ ಬಂತೋ
ಇಂದೀಗ ಇರುವೆ ನಿನ್ನ ಸ್ನೇಹದ
ನೆನಪಿನ ದೋಣಿಯಲಿ
ನೆನಪೊಂದು ಮಧುರ
ಸ್ನೇಹದ ನೆನಪು ಅತಿ ಮಧುರ
ಬಂದೀತೆ ಬಾಲ್ಯದ ಆ
ಸುಂದರಸ್ನೇಹದ ದಿನಗಳು
ಕಾಯುತ್ತಿದೆ ಈ ಜೀವ
ಶುದ್ಧ ಸ್ನೇಹದ ಜಲಕೆ
ಪಂಕಜಾ.ಕೆ. ಮುಡಿಪು
Comments
Post a Comment