ಅಮ್ಮನ ನೆನಪು
ಸಿಹಿ ಸಿಹಿ ನೆನಪು
ಅಮ್ಮನ ನೆನಪು
ಮನದಲಿ ತುಂಬಿಹುದು
ವರ್ಣಿಸಲಸದಳ ಅಮ್ಮನ ಮಮತೆ
ತನ್ನಯ ಸಂತಸ ಬದಿಗಿಟ್ಟು
ಸಾಕಿದ ರೀತಿಯ ಮರೆವುದು ಉಂಟೆ
ಅಮ್ಮನ ಮಮತೆಗೆ ಮಿತಿಯುಂಟೆ
ಪ್ರೀತಿಯ ಅಪ್ಪ ಅಮ್ಮನನು
ವೃದ್ಯಾಪ್ಯದಲಿ ಚಂದದಿ
ನೋಡಿದರದುವೆ ದೇವರ
ಪೂಜೆಗೆ ಸಮಾನವಹುದು
ಅಪ್ಪ ಅಮ್ಮ ದೇವರು ಕೊಟ್ಟ
ವರವೇ ಒಂದು ನಮಗೆ
ಅವರಿಲ್ಲದಿರೆ ನಾವಿಲ್ಲ
ಬಾಲ್ಯದಲ್ಲಿ ಪ್ರೀತಿಲಿ ಸಾಕಿ ನಮ್ಮಯ ಏಳ್ಗೆಗೆ ಕಾರಣರವರು
ಅಪ್ಪ ಅಮ್ಮನ ವೃದ್ಯಾಪ್ಯದಲಿ ಪ್ರೀತಿಲಿ ನೋಡಲೇ ಬೇಕು
ಹೆತ್ತವರ ಋಣವ ತೀರಿಸಬೇಕು
ಅಮ್ಮಾ ಎನಲು ಬಾಯಿಗೆ
ಸಕ್ಕರೆ ಸುರಿದಂತೆ
ಸಿಹಿ ಸಿಹಿ ನೆನಪು ಅಮ್ಮನ ನೆನಪು
ಮನದಲಿ ತುಂಬಿಹುದು
ಪಂಕಜಾ.ಕೆ.
Comments
Post a Comment