ಹಕ್ಕಿ ಗೂಡು
ಎಂದಿನಂತೆ ಅಂದು ನಾನು ಬೆಳಗಿನ ನಡಿಗೆ ಯನ್ನು ಮುಗಿಸಿ ಹೊರಗಿನ ವರಂಡಾದಲ್ಲಿ ಆರಾಮಾಸನದ ಮೇಲೆ ಪವಡಿಸಿದ್ದೆ.ಇದ್ದಕ್ಕಿದ್ದಂತೆ ಎರಡು ಚಂದದ ಹಕ್ಕಿಗಳು ಹಾರಿ ಬಂದು ನಾನು ಬೆಳೆಸಿದ ಹೂಬಳ್ಳಿಯ ಮೇಲೆ ಕುಳಿತು ಉಯ್ಯಾಲೆ ಆಡುತ್ತಾ ಕಿಚಿ ಕಿಚಿ ಎಂದು ಹರಟುವ ಸುಂದರ ದೃಶ್ಯ ನೋಡಿ ಮೈ ಮರೆತೆ
ಮರುದಿನ ಆ ಎರಡು ಹಕ್ಕಿಗಳು ಹೂ ಬಳ್ಳಿಯ ಮೇಲೆ ಪುಟ್ಟದಾದ ಗುಡೊಂದನ್ನು ಕಟ್ಟುತ್ತಾ ಇದ್ದವು .ಒಂದು ಹಕ್ಕಿ ಆಗಾಗ ಹಾರಿ ಹೋಗಿಕೊಕ್ಕಿನಲ್ಲಿ ಕಚ್ಚಿ ಹುಲ್ಲು ಕಡ್ಡಿಗಳನ್ನು ತಂದು ಚೆನ್ನಾಗಿ ಗೂಡು ಹೆಣೆಯುತ್ತಾ ಇತ್ತು .ಒಂದೆರಡು ಬಾರಿ ತನ್ನ ಸಂಗಾತಿಯನ್ನು ಕರೆತಂದು ಗೂಡನ್ನು ಅದಕ್ಕೆ ತೋರಿಸಿ ಸಂಭ್ರಮ ಪಡುತ್ತಿತ್ತು.
ನಾನು ಹತ್ತಿರ ಬಂದ ತಕ್ಷಣ ಹಾರಿ ಹೋಗಿ ದೂರದ ಮರದ ಮೇಲೆ ಕೂತು ನನ್ನ ಚಲನವಲನಗಳನ್ನು ಗಮನಿಸುತ್ತಾ ತನ್ನ ಸಂಗಾತಿಯಲ್ಲಿ ತನ್ನದೇ ಭಾಷೆಯಲ್ಲಿ ಹರಟುತ್ತಿತ್ತು.
ನಾನು ಫೋಟೋ ತೆಗೆಯಲು ಹೋದರೆ ಗೂಡೊಳಗೆ ಮುಖ ಮರೆಸಿ ಫೋಟೋಕ್ಕೆ ಸಿಗದೆ ಹಾರಿ ಹೋಗುತ್ತಿತ್ತು ಮೇಲೆ ಮರದಮೇಲೆ ಕುಳಿತು ಸಂಶಯದಿಂದ ನನ್ನನ್ನು ದಿಟ್ಟಿಸಿ ನೋಡುವುದು ನೋಡಿ ನನಗಂತೂ ನಗು ತಡೆಯಲೇ ಆಗುತ್ತಿರಲಿಲ್ಲ
Comments
Post a Comment