ಮೂರು ಹನಿಗಳು
ನಾನೇ ರೀ
ನಗುಮೊಗದಿ ನಿಂತಿದ್ದ ಚೆಲುವೆಯನು ಕಂಡು
ನೀನಾರೆ ಎಂದು ಹತ್ತಿರ ಹೋದರೆ ನಾನೇ ರೀ ಎನ್ನುವುದೇ
ರಾಣಿ
ರಜತ ಪರದೆಯ ಎದುರು ಆಕೆ ರಾಣಿ
ಪರದೆ ಬಿದ್ದೊಡನೆ ಆಕೆ ಒಂದು ಪ್ರಾಣಿ
ನಾರಿ
ದೂರದಲ್ಲಿ ಕಂಡನವ ಹಾರಾಡುವ ಸಾರಿ
ಆಶೆಯಿಂದ ಬಂದ ಬಳಿಸಾರಿ
ಸೆರಗ ಸರಿಸಲಲ್ಲಿ ಕಂಡ ಸ್ತ್ರೀ ವೇಷಧಾರಿ😀
ಪಂಕಜಾ ಕೆ. ಮುಡಿಪು
Comments
Post a Comment