ಹನಿಕವನ 2
ಪ್ರಳಯ
ನಿನ್ನ ಒಲವಿನ ಹನಿಗಾಗಿ
ಬಾಯ್ಬಿಟ್ಟು ಕಾದ ನನಗೆ
ನೀ ಕೊಟ್ಟ ಉಡುಗೊರೆ
ನನ್ನದೆಲ್ಲವ ಕೊಚ್ಚಿ
ಕೊಂಡೊಯ್ದ್ದ ಮಹಾಮಳೆ
ನಿನ್ನ ಅಬ್ಬರಕೆ ಬೆಚ್ಚಿ ಬೆರಗು
ಅಳಿಸಿಹೋಯ್ತು ನನ್ನೆಲ್ಲ ಸೊಬಗು
ಸಾಕು ಸಾಕಾಯ್ತು ನಿನ್ನ ಹುಚ್ಚು ಪ್ರೀತಿ
ಉಳಿದಿರುವುದೊಂದೇ ತುಂಬು ಭೀತಿ
2. ಒಗ್ಗಟ್ಟು
ಕಾಳು ಕಂಡು ಕರೆಯುತಿವೆ
ತನ್ನ ಬಳಗಗಳ ಹಕ್ಕಿಗಳು
ಸಕ್ಕರೆಯು ಕಂಡಾಗ ಬರುವುದು
ಸಾಲು ಸಾಲು ಇರುವೆಗಳು
ಮನುಜನಲಿ ಎಲ್ಲಿದೆ ಒಗ್ಗಟ್ಟು
ದಿನದಿನವೂ ಆಗುತಿದೆ ಬಾಳು ಬಿಕ್ಕಟ್ಟು
ಕಲಿಯಬೇಕಿದೆ ಇನ್ನಾದರೂ ನಾವು
ಪ್ರಾಣಿ ಪಕ್ಷಿಗಳ ಒಗ್ಗಟ್ಟಿನ ಪಾಠ
ಪಂಕಜಾ.ಕೆ.
Comments
Post a Comment