ಗಜಲ್. 20 ಆತುರ
ಮಳೆ ಬಂದಾಗ ಹರಿವ ನೀರಿನಲ್ಲಿ ಆಡುವಾಸೆ
ಗರಿಬಿಚ್ಚಿ ಹಕ್ಕಿಗಳಂತೆ ಬಾನಿನಲ್ಲಿ ಹಾರಾಡುವಾಸೆ
ತುಂಬಿ ಹರಿಯುವ ತೊರೆಯ ಕಂಡಿದೆ ಮನವು
ಮನಸಾರೆ ಅಲೆಗಳಲ್ಲಿ ತೇಲಾಡುವಾಸೆ
ಹೂವ ಮಧುವ ಸವಿಯುತಿವೆ ದುಂಬಿಗಳು
ನಿತ್ಯವೂ ಹೂದೋಟದಲ್ಲಿ ಅಡ್ಡಾಡುವಾಸೆ
ಬಾವನೆಗಳ ಬೆನ್ನೇರಿ ಓಡುತಿರುವ ಬದುಕು
ಕನಸುಗಳ ಕಟ್ಟಿ ಜೀವನದಲ್ಲಿ ನಲಿಯುವಾಸೆ
ಆತುರದಲ್ಲಿ ಹೂವನ್ನು ಕೀಳಬಾರದು ಎಂಬ ಅರಿವಿದೆ
ಪಂಕಜಾಗೆ ಪ್ರಕೃತಿ ಸೌಂದರ್ಯದಲ್ಲಿಮೈಮರೆಯುವಾಸೆ
ಪಂಕಜಾ.ಕೆ.
Comments
Post a Comment