6..ಚುಟುಕುಗಳು
1.ಹಸಿರು. ಉಸಿರು
ಹಸಿರು ಇದ್ದರೆ ತುಂಬುವುದು ಉಸಿರು
ಉಳಿಸಬೇಕು ಭೂತಾಯಿ ಬಸಿರು
ಕಾಂಕ್ರೀಟ್ ಕಾಡಲೇನಿದೆ ಸೊಬಗು
ಹಸಿರು ತುಂಬಿದ ಕಾನನವು ಬೆರಗು
2 ವ್ಯರ್ಥ
ಹಸಿದವನ ಎದುರು
ಹಳಸಿದ ಭೋಜನವಿಟ್ಟಂತೆ
ಅರ್ಥವಾಗದ ಸಾಹಿತ್ಯ
ಎಷ್ಟಿದ್ದರೇನು ವ್ಯರ್ಥ!
3 ನಂಬಿಕೆ
ನಂಬಿಕೆ ಇಲ್ಲದಿದ್ದರೆ
ಸಂಬಂಧಗಳಲ್ಲಿ ಬಿಕ್ಕಟ್ಟು
ಒಗ್ಗಟ್ಟು ಇಲ್ಲದಿದ್ದರೆ
ಜೀವನ ಒಂದು ಕಗ್ಗಂಟು
4 ಕಿಡಿ
ಪ್ರೀತಿ ವಿಶ್ವಾಸದ ಬೆಳೆಗೆ
ಉರಿದು ಭಸ್ಮವಾಗಲು
ಸಣ್ಣ ಸಂಶಯದ ಕಿಡಿ ಸಾಕು
5 ಮೋಹ
ಹೆಣ್ಣು ಹೊನ್ನು ಮಣ್ಣಿಗಾಗಿ
ನಡೆಸಿದನು ಯುದ್ಧ
ಕಾಲನ ಕರೆ ಬಂದಾಗ
ತಿಳಿಯುತು ತಾನೆಷ್ಟು ಪೆದ್ದ
6 ನಿಯತ್ತು
ಕೋಪ ಬಂದಾಗಲೆಲ್ಲ
ಬೈಯುವರು ನಾಯಿ
ಅವರಿಗೇನು ಗೊತ್ತು
ನಾಯಿಯ ನಿಯತ್ತು
ಪಂಕಜಾ.ಕೆ
Comments
Post a Comment