ಗಜಲ್ 22
ಹಸಿದವನು ಮಾಡುವನು ಆಹಾರದ ಬೇಟೆ
ಜ್ಞಾನದಾಹಿ ಹುಡುಕುವನು ಜ್ಞಾನದ ಬೇಟೆ
ಪುಸ್ತಕಗಳ ಓದಿನಲ್ಲಿ ಮೈ ಮರೆತಿರುವೆ ನಾ
ಮನಕೆ ಇನ್ನಷ್ಟು ಬೇಕೆಂಬ ಇಂಗದ ಬೇಟೆ
ವಿದ್ಯೆ ಇದ್ದರೆ ಎಲ್ಲೆಲ್ಲೂ ಸನ್ಮಾನ ದೊರೆತೀತು
ವಿಷಯಗಳ ತಿಳಿದಷ್ಟೂ ಕುಂದದ ಬೇಟೆ
ತಿಳಿದವರಿಂದ ತಿಳಿಯುತ್ತಾ ಕಲಿಯಬೇಕು
ಅರಿತಷ್ಟೂ ಹುಡುಕುವ ಅಪರೂಪದ ಬೇಟೆ
ಪಂಕಜಾಳಿಗೆ ಕಲಿತಷ್ಟೂ ತೀರದ ದಾಹ
ಕಲಿಯಬೇಕೆನ್ನುವ ಮನದ ತುಡಿತದ ಬೇಟೆ
ಪಂಕಜಾ.ಕೆ.
Comments
Post a Comment