ನಿನ್ನಾಟ
ಮನದಲಿ ನೂರಾರು ಆಸೆಗಳ ತುಂಬಿ
ನಿನ್ನಾಗಮನಕೆ ಎದೆತೆರೆದು ಕಾಯುತ್ತಿದ್ದೆ
ಆಸೆಯ ಕರಿಮುಗಿಲು ಮನದಲಿ ಕಟ್ಟಿ
ಹಸಿರು ಹೂಬಳ್ಳಿ ಚಿಗುರಿಸುವ ನಿರೀಕ್ಷೆಯಲಿದ್ದೆ
ಆಸೆ ನಿರಾಸೆಗಳ ತಾಕಲಾಟದಲಿರಲು
ಮುದ್ದಾಡುತ ನೀಬಂದು ಮೈಮರೆಸಿ ಬಿಟ್ಟೆ
ಒಡಲು ತುಂಬಿದ ಬೇಗೆಯನು ತಣಿಸಿ
ಮನಕೆ ಚೆಲುಉಸಿರ ತುಂಬಿ ಬಿಟ್ಟೆ
ಹುಚ್ಚುಪ್ರೀತಿಯ ಅಲೆಯಲಿ ನನ್ನತೇಲಿಬಿಟ್ಟೆ
ಕೊಚ್ಚಿಹೋಯ್ತಲ್ಲಾ ನನ್ನ ಒಡಲು
ಮೊಸದಾಟಕೆ ಬರಿದಾಯ್ತು ಬಾಳಬಯಲು
ಎಲ್ಲೆಲ್ಲೂ ತುಂಬಿತು ಕಣ್ಣೀರ ಹೊನಲು
ಹರಿದೋಯ್ತು ಜೀವಿಗಳ ಬಾಳ ಬಟ್ಟೆ
ಹಸಿರು ಉಣಿಸುವ ಆಶೆ ಸತ್ತೋಯ್ತು
ಜೀವ ಸೊತ್ತುಗಳೆಲ್ಲಾ ಕೊಚ್ಚಿ ಹೋಯ್ತು
ಮನುಜನಾಡಿದ ಮೋಸದಾಟದಲಿ
ಮರೆಯಲಾರದಂತ ನೋವು ನಿನ್ನಿಂದಾಯ್ತು
ಪಂಕಜಾ ಕೆ.
Comments
Post a Comment