ಶಾಯರಿ. ...1 ಬರೆಯಬೇಕೆಂದಿದ್ದೆ ಶಾಯರಿ
ಮುಗಿದುಹೋಯಿತು ಪೆನ್ನಿನ ಶಾಯಿರಿ
ಏನು ಮಾಡಲಿ ನಾನು ಹೇಳಿರಿ
ಗಲ್ಲಕ್ಕೆ ಕೈ ಹಚ್ಚಿ ಕೊಂಡು ಕೂತೇರಿ
ಶಾಯರಿ ...2
ನಿನ್ನ ಕಣ್ಣ ಕಾಂತಿ ನೋಡಿ ಬಾನ ತಾರೆ ನಕ್ಕಿತು
ನಿನ್ನ ಮೈಯ ಬಣ್ಣದೆದುರು ಚಂದ್ರ ಕಾಂತಿ ಕುಗ್ಗಿತು
ಮೃದುಮಧುರ ಮಾತು ಕೇಳಿ ಕೋಗಿಲೆಯ ಉಲಿಯು ನಿಂತಿತು
ನಿನ್ನ ಒಲವ ಕಂಡು ಮನವು ರಾಧಾಕೃಷ್ಣರ ನೆನೆಯಿತು
ಪಂಕಜಾ.ಕೆ.
Comments
Post a Comment