ಗಜಲ್. 21
ಬಾನಿನಲಿ ಹರಡಿರುವ ಬಿಳಿಯ ಮುಗಿಲು ಎಷ್ಟು ಚೆನ್ನ
ಅಂಬರದಲಿ ತುಂಬಿದ ಬೆಳದಿಂಗಳ ಹಾಲು ಎಷ್ಟು ಚೆನ್ನ
ಸೂರ್ಯ ಮೂಡುವ ಮೊದಲೇ ಹಾಸಿಗೆ ಬಿಟ್ಟು ಏಳಬೇಕು
ರವಿಕಿರಣದ ಸ್ಪರ್ಶದಲಿ ಮೈ ಮರೆಯಲು ಎಷ್ಟು ಚೆನ್ನ
ರಾತ್ರಿಯಾಯಿತೆಂದರೆ ಮನೆಗೆ ಮರಳುವ ಧಾವಂತ
ಹಾರಾಡುವ ಹಕ್ಕಿಗಳ ಗುಂಪು ನೋಡಲು ಎಷ್ಟು ಚೆನ್ನ
ಹಸಿರು ಗಿಡ ಮರಗಳಲಿ ತುಂಬಿದೆ ಜೀವಿಗಳಿಗೆ ಉಸಿರು
ಕೋಗಿಲೆಯ ಸವಿಯಾದ ಗಾನ ಕೇಳಲು ಎಷ್ಟು ಚೆನ್ನ
ನವಿಲು ಕುಣಿಯಿತೆಂದು ಕೆಂಬೂತ ಕುಣಿಯುವುದು ಸರಿಯಲ್ಲ
ಪಂಕಜಾ ಪ್ರಕೃತಿ ಸೌಂದರ್ಯ ಸವಿಯಲು ಎಷ್ಟು ಚೆನ್ನ
ಪಂಕಜಾ.ಕೆ.
Comments
Post a Comment