ಪ್ರೇಮ ಜ್ಯೋತಿ
ನನ್ನ ಜತೆಗೆ ಹೆಜ್ಜೆ ಹಾಕುತ
ನನ್ನ ಬಾಳ ಪಯಣದಲ್ಲಿ
ಜತೆಗೆ ಬರುವೆಯ ಚೆಲುವಿಯೇ
ನನ್ನ ಒಲವ ತುಂಬಿ ಕೊಡುವೆ
ಕಣ್ಣ ರೆಪ್ಪೆಯಂತೆ ನಿನ್ನ
ಒಲವಿನಿಂದ ಕಾಣುವೆ
ಬಾರೆ ನನ್ನ ಪ್ರೇಮ ಜ್ಯೋತಿ
ನೀ ಎನ್ನ ಭಾಗ್ಯ ಜ್ಯೋತಿ
ನೀ ಜತೆಯಲಿದ್ದರೆ ಬಾಳು ಸುಂದರ
ನವಿರು ಹೆಜ್ಜೆಗೆ ಹೆಜ್ಜೆ ಸೇರಿಸಿ
ಪ್ರೇಮ ಬಂಧನದಲ್ಲಿ ಬಿಗಿವೆ
ನಗುತ ನೀನು ಜತೆಗೆ ಸೇರು
ನನ್ನ ಪ್ರೇಮ ಜ್ಯೋತಿಯೇ
ಬಾಳ ಪಯಣದಲಿ ಜತೆಗೆ
ಪ್ರೀತಿಯಿಂದ ನಲಿಯುವ
ಒಲವ ಸುಧೆಯ ಸವಿದು
ನಾವು ನಗುತ ದಿನವ ಕಳೆಯುವ
ಪಂಕಜಾ.ಕೆ.
Comments
Post a Comment