ಸುಂದರ ಕ್ಷಣ
ಮಳೆಗಾಲವು ಮೆಲ್ಲ ಮೆಲ್ಲನೆ ಬಂದಿತು
ಹೊತ್ತಿ ಉರಿದ ಧರೆಗೆ ತಂಪನು ತಂದಿತು
ಮಳೆಯ ಸ್ಪರ್ಶವು ಇಳೆಗೆ ತಂದಿತು
ತಂಪು ತುಂಬಿದ ಹರ್ಷದೊಲವಿನ ತೇರನು
ಹಸಿರು ಹುಲ್ಲು ತಲೆಯನೆತ್ತಿ ಬಿಂಕದಿಂದ ಬೀಗಿತು
ಧರೆಯ ತುಂಬಾ ಹಸಿರುಹೂಗಳ ಹೊದಿಕೆಯನ್ನು ಹೊದೆಸಿತು
ಮೋಡಗಳ ಸರಮಾಲೆಯಲಿ ನವೋಲ್ಲಾಸದ ಹಾಸ
ಬಾನಲಿ ಗುಡುಗುಡಿಸಿ ಸುರಿಸಿದಾ ಮಳೆ ಹನಿಯ ಶ್ವಾಸ
ಮುತ್ತು ಪೋಣಿಸಿದಂತಾ ಒಲವಿನ ಗಣಿ
ಮೇಘಗಳು ಸುರಿಸುವ ಒಂದೊಂದು ಹನಿ
ಸುಂದರ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ ಮನಸು
ಹಸಿರು ಕಾನನದಲ್ಲಿ ನಲಿದಾಡುವ ಕನಸು
ಪಂಕಜಾ.ಕೆ.
Comments
Post a Comment