ಚೆಲುವ ಬಾವ
ನಾನು ಹೆಣ್ಣು ನೀನು ಗಂಡು
ಒಲವೇ ನಮ್ಮ ಜೀವನ
ನಾನು ಹೂವು ನೀನು ದುಂಬಿ
ಪ್ರೀತಿ ನಮ್ಮ ಬಾವನ
ನಾನು ಭೂಮಿ ನೀನು ಭಾನು
ಸುರಿಸು ಮಳೆಯ ಹೂರಣ
ಸೂರ್ಯ ಚಂದ್ರ ಮಿನುಗುತಾರೆ
ಒಲವ ಸುರಿವ ಜೀವನ
ನನ್ನ ಒಡಲ ತುಂಬಾ ನಲಿವು
ಚೆಲುವ ನೀನೇ ಇದಕೆ ಕಾರಣ
ಎದೆಯ ಬಾವ ತುಂಬಿ ಬಂದು
ಕವಿತೆಯಾಗಿ ಸೆಳೆದಿದೆ
ಮನದತುಂಬಾ ದುಂಬಿಯಂತೆ
ಚೆಲುವ ಬಾವ ಅರಳಿದೆ
ಹಮ್ಮು ಬಿಮ್ಮು ನಮ್ಮಲಿಲ್ಲ
ಒಲಿದ ಹೃದಯ ಹಾಡಿದೆ
ಕೋಗಿಲೆಯ ಇಂಚರವು
ಬಾಳ ತುಂಬಾ ತುಂಬಿದೆ
ಹೃದಯರಾಗ ಮೀಟಿತೆನ್ನ
ನಿನ್ನ ಒಲವ ಗಾಯನ
ಮನದ ಗುಡಿಯ ತೆರೆಸಿತೆನ್ನ
ನಿನ್ನ ಒಲವ ನೋಟವು
ಪಂಕಜಾ.ಕೆ.
Comments
Post a Comment