ಲಕ್ಷ್ಮಿ ಸ್ತುತಿ
ಪಂಕಜವಾಸಿನಿ ಹರಿ
ವಕ್ಷಸ್ಥಳ ನಿವಾಸಿನಿ
ಮಂಗಳ ರೂಪಿಣಿ ಜಗದಂಬೆ ll
ಸುರಗಣ ಪೂಜಿತೆ
ಹರಿಯರಮಣಿ
ನಿತ್ಯವೂ ಕಾಯೋ ಜಗದಂಬೆ ll
ಅನುದಿನ ನಿನ್ನಯ
ನಾಮವ ಜಪಿಸುತ
ಸ್ತುತಿಸುವೆ ನಿನ್ನನು ಭಕುತಿಯಲಿ ll
ಕರುಣಿಸಿ ವರಗಳ
ಪೊರೆ ನೀಎಮ್ಮನು
ಬೇಗನೇ ಬಾರೋ ಮಹಾಲಕ್ಷ್ಮಿ
ನಿತ್ಯವೂ ಪೂಜಿಸಿ
ಹೂಗಳ ಅರ್ಪಿಸಿ
ಭಕುತಿಯಲಿ ನಿನ್ನನು ಭಜಿಸುವೆನುll
ಅಂಬುಜಮುಖಿ
ಪಂಕಜಲೋಚನೆ
ಕಾಯೋ ನಮ್ಮನು ಸಿರಿಲಕ್ಷ್ಮಿ ll
ನಿನ್ನಯ ನಾಮವ
ಜಪಿಸುತ ಅನುದಿನ
ನನ್ನನುನಾನೇ ಮರೆಯುವೆನುll
ಪ್ರೇಮ ಸ್ವರೂಪಿಣಿ
ವರಗಳ ಕೊಡುತ
ಪೊರೆ ನೀ ನಮ್ಮನು ವರಲಕ್ಷ್ಮಿ ll
ಪಂಕಜಾ.ಕೆ ಮುಡಿಪು
Comments
Post a Comment