ಗಣಪಗೆ ನಮನ
ನಮಿಸುವೆನು ಗಣಪ
ನಿನ್ನ ಚರಣ ಕಮಲಗಳಿಗೆ
ಗಜಮುಖವದನ ಗಜಾನನ
ವಿಘ್ನನಿವಾರಕ ವಿಘ್ನೇಶ್ವರ
ಈಶ್ವರ ನಂದನ ಗಣೇಶ್ವರ
ಪಾರ್ವತಿ ತನಯ ಗಜಮುಖನೆ
ಮೊದಲ ವಂದನೆಯ ಸಲ್ಲಿಸುವೆ ನಿನಗೆ
ಭಾದ್ರಪದ ಚೌತಿಯಶುಭದಿನದಿ
ಹರಸು ಬಾ ನಮ್ಮನು
ಚಕ್ಕುಲಿ ಉಂಡೆ ಕಡುಬುಗಳ
ನೈವೇದ್ಯವನಿಟ್ಟು ಬಕುತಿಯಲಿ
ನಿನಗೆ ಕರ ಮುಗಿವೆ
ಕರುಣೆಯ ತೋರಿ ಕಾಯು ನಮ್ಮನೆಲ್ಲರನು
ಎಲ್ಲರ ಮನೆಯ ಬಗೆ ಬಗೆ ತಿಂಡಿಗಳ ತಿಂದು
ನಲಿದನು ನಮ್ಮ ಮುದ್ದುಗಣಪ
ಹರಸುತ ಭಕ್ತರ ಪೊರೆವ ಭಕ್ತಜನಪ್ರಿಯ
ಮೂಷಿಕ ವಾಹನ
ಮೋದಕ ಪ್ರೀಯನೇ ಗಜವದನ
ನಿನ್ನ ಕೃಪಾಛತ್ರದಲಿಟ್ಟು ಕಾಯು ತಂದೆ
ಪಂಕಜಾ.ಕೆ. ಮುಡಿಪು ಕುರ್ನಾಡು
Comments
Post a Comment