ಚೆಲುವೆ
ಚೆಲುವಾದ ಮೊಗದಲಿ
ಮುಗುಳುನಗೆ ಅರಳಿರಲು
ಮನಸೋಲದವರಾರು ಹೇಳು ಚೆಲುವೆll
ಹೊಳೆ ಹೊಳೆವ ಮುಂಗುರುಳು
ನಸುನಗುವ ಚೆಂದುಟಿಯ
ಚೆಲುನಗೆಗೆ ಮರುಳಾಗದವರಾರು ಹೇಳು ಚೆಲುವೆll
ಕಣ್ಣೋಟದಲೆ ಕೆಣಕುತ
ಮೈ ಮರೆಸಿ ಹಾಡುತ
ನಿಂತಿರುವ ಸೊಬಗಿಗೆ ಒಲಿಯದವರಾರು ಹೇಳು ಚೆಲುವೆll
ತಾರೆಗಳ ತೋಟದಲಿ
ಚಂದಿರನು ಆಡುವಂತೆ
ಒಡನಾಟವ ಬಯಸದವರಾರು ಹೇಳು ಚೆಲುವೆll
ಪಂಕಜಾ.ಕೆ. ಮುಡಿಪು
Comments
Post a Comment