ಅಜ್ಜಿಯ ಪೇಟೆ ಪ್ರಯಾಣ
ಅಜ್ಜಿಯೊಮ್ಮೆ ಮೊಮ್ಮಗನ ಕಾಣಲೆಂದು
ಪೇಟೆ ಬೀದಿಗೆನಡೆದುಕೊಂಡು ಹೊರಟಳು
ಪೇಟೆ ತುಂಬಾ ತಿರುಗುತ್ತಿರುವ ಜನರ ಕಂಡು
ಬೆರಗಾಗಿ ತೆಗದ ಬಾಯಿ ಮುಚ್ಚಲಿಲ್ಲಅವಳದು
ಏನು ಇದು ಇಂತ ವೇಷ ಇಂದು ನವರಾತ್ರಿಯೊ
ಅಜ್ಜಿ ಕಣ್ಣುಬಿಟ್ಟುಅವರ ನೋಡುತಲ್ಲಿ ನಿಂತಳು
ಉದ್ದಜಡೆ ಗಡ್ಡದಾರಿ ಹಿಂದೆ ಜುಟ್ಟು ಮುಂದೆ ಮೀಸೆ
ಯಾರು ಇವರುಇಷ್ಟು ಜನ ಶಿಖಂಡಿಯೇ
ಅಯ್ಯೋ ದೇವ ಹೋಗಲೆಂತು ಇವರಕಣ್ಣು ತಪ್ಪಿಸಿ
ನಾನು ಕೆಟ್ಟೆ ಮುಖವ ಮರೆಸಿ ಹೋಗುತಿರಲು ಮೆಲ್ಲಗೆ
ಆಜ್ಜಿ ಎನುತ ತಬ್ಬಿಕೊಂಡ ವೇಶದಾರಿಯ ಕಾಣಲು
ಒಂದೇ ಉಸಿರಿಗೆ ಶಕ್ತಿಯೆಲ್ಲ ಕೂಡಿಸಿಓಡಿ ಓಡಿ ದಣಿದಳು
ಹಿಂದೆ ತಿರುಗಿ ನಿಂತು ನೋಡಲು
ಹಿಂದಿಂದೆ ಬರುತ್ತಿರುವ ವೇಷಧಾರಿ ಕಂಡಳು
ಕೈಆಡಿಸಿ ಕರೆಯುತಿರುವುದ ನೋಡಿ
ಇನ್ನಷ್ಟು ಭಯ ಗೊಂಡು ಅಜ್ಜಿ ಕಂಬಿ ಕಿತ್ತಳು
ಮನೆಯು ಬರಲು ಅಯ್ಯೋ ಸಾಕು ಪೇಟೆ
ಸಹವಾಸ ಎನುತ ನಿಟ್ಟುಸಿರು ಬಿಟ್ಟಳು
ಮುಂದೆ ನಿಂತ ವೇಶದಾರಿಯ ಕಂಡು ಅಜ್ಜಿ ಕಕ್ಕಾಬಿಕ್ಕಿಯಾದಳು
ಏಕೆ ಓಡಿ ಬಂದೆ ನನ್ನ ಗುರುತು ಇಲ್ಲವೇ
ನಾನು ನಿಮ್ಮ ಮುದ್ದು ಪುಳ್ಳಿ ಸಿದ್ದ ಎನಲು
ಬೊಚ್ಚು ಬಾಯಿ ಬಿಟ್ಟು ಅಜ್ಜಿ
ಕೋಲು ಹಿಡಿದು ಬಂದಳು
ಪಂಕಜಾ.ಕೆ. ಮುಡಿಪು
Comments
Post a Comment