ಒಲವಹನಿ
ಅಗಸದಿ ತುಂಬಿರುವ ಮೋಡಗಳ ದಂಡು
ಮಳೆಯ ಹನಿಗಳ ಸುರಿಸಿ ತಂದಿತು ಇಳೆಗೆ ತಂಪು
ಮುದುಡಿದ ಮನಗಳು ಅರಳುತಿದೆ
ಒಲವ ಧಾರೆಯ ಸವಿದ ಇನಿಯಳಂತೆ
ಎಲ್ಲೆಲ್ಲೂ ಹರಿಯುತಿದೆ ನೀರಧಾರೆ
ಕೊಚ್ಚಿಹೋಗುತಿದೆ ಇಳೆಯ ಕೊಳೆ
ಮನದ ಕರಿ ಮೋಡಗಳು ಬಿರಿದು
ಒಲವ ಸಿಂಚನಕೆ ಅರಳಿತು ಕನಸು
ಇನಿಯನೊಲುಮೆಯ ಧಾರೆ
ತುಂಬುತಿದೆ ಮನದಲ್ಲಿ ಹರ್ಷಧಾರೆ
ಬಾಳಲಿ ಉಕ್ಕುತಿದೆ ಹರ್ಷದ ಹೊನಲು
ಮಳೆ ಬಂದು ತಂಪಾದ ಇಳೆಯ ತೆರದಿ
ಬಾನು ಸುರಿಸಿದ ಒಲವ ಮುತ್ತುಗಳು
ಇಳೆಯ ಮನದಲಿ ಹರ್ಷದ ಕಾರಂಜಿಗಳು
ಮಳೆಯ ಒಂದೊಂದು ಹನಿಗಳು ಮುತ್ತಾಯಿತು
ಬುವಿಯ ಒಡಲಲಿ ಹಸಿರು ತೆನೆ ತುಂಬಿತು
ಒಲವ ಮುತ್ತುಗಳ ಪಡೆದು
ಇಳೆಯು ನಕ್ಕಳು
ಸಂತಸದಿ ಮೈದುಂಬಿಹೊಸ ರಾಗ ಹಾಡುತ
ಎಲ್ಲೆಲ್ಲೂ ಹಬ್ಬಿತು ಹಸಿರು ಹೂ ಬಳ್ಳಿ
ವರುಣನೊಲವಿಗೆ ಇಳೆಗೆ ನವಿರು ಕಂಪನ
ಪಂಕಜಾ.ಕೆ.
Comments
Post a Comment