ನೆನಪಿನಲೆಗಳಲಿ
ಸಂತಸದ ಹಕ್ಕಿಗಳು
ಸವಿಜೇನ ಹೊನಲಾಗಿ
ಸಾವಿರ ಸಾವಿರ ಕನಸುಗಳಾಗಿ
ಸಾಗುತಿದೆ ಮನದಲಿ ಇಂದು
ನಲ್ಲ ನಿನ್ನ ಸವಿ ನೆನಪು
ನಾ ಮುಂದು ತಾ ಮುಂದು
ನವಿರಾಗಿ ಮನತುಂಬಿ
ನುಗ್ಗುತಿದೆ ಮನದಲಿ ಇಂದು
ಹಾರುತಿರುವ ಹಕ್ಕಿಗಳಂದದಿ
ಹೊಸಬಾಳ ಪಯಣದಲಿ
ಹಾಡುತ್ತಿದೆ ಹೊಸರಾಗ
ಹೂ ಮನದಲಿ ಇಂದು
ನಿನ್ನ ಸಾಂಗತ್ಯವು ಕೊಟ್ಟ ಕುಶಿ
ನಿನ್ನೆ ಇಂದಿನದಲ್ಲ
ನೋವು ನಲಿವುಗಳೆರಡರ
ನೆನಪಾಗಿಕಾಡುತಿದೆಮನದಲಿಇಂದು
ನಾವಿಬ್ಬರೊಂದಾಗಿ ಬಾಳಿ
ನಗುತ ಸಾಗಿದ ದಿನಗಳು
ನೆನಪಾಗಿ ನಿಂತಿದೆ
ನನ್ನ ಮನದಲಿ ಇಂದು
ಬಾಳ ಪಯಣದಲಿ
ಬಂದು ನೀ ನನ್ನ ಜತೆಯಾಗಿ
ಬಿಗಿದಪ್ಪಿ ಸಂತೈಸಿದಾಕ್ಷಣವು
ಬಾಳು ಸಾರ್ಥಕ್ಯ ಪಡೆದನೆನಪು
ಬಂದು ನಿಂತಿದೆ ಮನದಲಿ ಇಂದು
ಪಂಕಜಾ.ಕೆ.
Comments
Post a Comment