ನಿಶಾ ದೇವಿ
ಬಾನಲಿ ಚೆಲು ಬಣ್ಣವ ಕಲಸುತ
ರವಿ ತಾನಿಶೆಯೊಡನಾಡಲು ತೆರಳಿದನು
ಆಗಸದಂಚಲಿ ಹಬ್ಬಿದ ಬಣ್ಣದ ಓಕುಳಿ
ಎಲ್ಲೆಡೆ ತುಂಬಿತುಚೆಲುವಿನ ಚಿತ್ತಾರದ ಟಿಕಳಿ
ಬೀಸುವ ತಂಗಾಳಿಯ ತಂಪು
ಗಿಡಮರಗಳ ತೊನೆದಾಟದ ಸೊಂಪು
ರಾತ್ರಿಹೂಗಳು ಬಿರಿದರಳುವ ಕಂಪು
ಮೈಮನವೆಲ್ಲಾ ಹಬ್ಬುವ ಆನಂದದ ಹುರುಪು
ನೋಡದೋ ಬಂದನು ಮೋಡದ ಮರೆಯಲಿ
ಇಣುಕುತ ಬೆಳ್ಳಿಯ ತಟ್ಟೆಯ ತೆರದಿ
ಭೂಮಂಡಲಕೆಲ್ಲಾ ಹಾಲಿನ ಬೆಳಕನು ಚೆಲ್ಲಿ
ತಾರೆಗಳನೋಡನಾಡುತ ಚಂದಿರ ಬಂದ
ಧರೆಯಲಿ ಹರಡಿತು ಕಂಪಿನ ತಂಪು
ಮೈಮನ ಮರೆಸುವ ಸೊಬಗಿನ ಇಂಪು
ಪಂಕಜಾ.ಕೆ.
Comments
Post a Comment