ಪ್ರಕೃತಿಯ ಬಂಧ
ಬಾನಲಿ ತೇಲಾಡುತಿವೆ ಮೋಡಗಳ ಹಿಂಡುl
ಆಗಸದಿ ಹಾರಾಡುತಿವೆ ಹಕ್ಕಿಗಳ ದಂಡುll
ರವಿ ತಾ ಇಳೆಗೆ ಬೆಳಕ ಸುರಿಸಲು ಬಂದl
ಭೂತಾಯಿ ಹೊದ್ದಿರುವ ಹಸಿರು ಸೀರೆಯ ಅಂದll
ಹರಡಿತದೋ ಎಲ್ಲೆಲ್ಲೂ ಚೆಲುವ ಬಣ್ಣಗಳ ರಂಗುl
ಕವಿಮನದಲಿ ತುಂಬುತಿದೆ ಯಾವುದೋ ಗುಂಗುll
ಭೂರಮೆಯ ಚೆಲುವು ಕಣ್ಣು ಕುಕ್ಕುವ ಚಂದl
ಕಣ್ಣು ಮನಕೆಲ್ಲಾ ತುಂಬುತಿದೆ ಆನಂದll
ಪ್ರಕೃತಿ ಸಿರಿಯ ಬಂಧನದಲ್ಲಿರಲು ಮನವುl
ಕಳೆದುಹೋಗುತಿದೆ ಮೈ ಮನದ ಅರಿವುll
ಉಳಿಸಿ ಬೆಳೆಸಬೇಕು ಭೂತಾಯಿ ಚೆಲುವುl
ಪ್ರಕೃತಿಯೊಡನಾಟದಲ್ಲಿ ನಲಿಯಬೇಕು ಮನವುll
ಪಂಕಜಾ.ಕೆ.
Comments
Post a Comment