ಪ್ರೀತಿ
ನಿನ್ನ ಅನುರಾಗದ ಸೆಳೆತದಲಿ
ಅದೇನೋ ಮೋಡಿಯೋ ಕಾಣೆ
ಮನಸು ನವಿಲಿನ ತೆರದಲಿ
ಕುಣಿಸಿ ಮೀಟಿತು ನನ್ನೆದೆಯ ವೀಣೆ
ಇನಿಯಾ ನೀ ಬಂದು ಸೆಳೆದೆ ನನ್ನ ಕಣ್ಣ
ಹೊಮ್ಮಿತು ತನುಮನದಲಿ ಹೊಸ ಬಣ್ಣ
ಭಾವನೆಗಳ ಭಾರಕ್ಕೆ ಮನಸು ನವಿಲು
ತುಂಬುತಿದೆ ತನುವಲಿ ಯಾವದೋ ಅಮಲು
ಪ್ರೀತಿ ಭಾವವು ಮನದಲಿ ತುಂಬಿ
ನೀಎನ್ನ ಚೆಲುವರಸ ಹೀರುವ ದುಂಬಿ
ಒಲವ ಸವಿಯಲಿ ಏನು ಘಮಲು
ತುಂಬುತಿದೆ ತನುಮನದಲಿ ಅಮಲು
ಇನಿಯನಾಸರೆಯು ಬಾಳಿಗೆ ಚಂದ
ಒಲವು ತುಂಬಿದ ಪ್ರೀತಿಯ ಸೆಳೆತ ಬಂಧ
ಪ್ರೀತಿ ಜೇನನು ಹರಿಸು ಮನಕೆ
ಮಾದರಿಯಾಗಲಿ ನಮ್ಮಬಾಳು ಜಗಕೆ
ಪಂಕಜಾ ಕೆ. ಮುಡಿಪು
Comments
Post a Comment