ಗಜಲ್
ನಿನ್ನೊಡನಾಟವು ಮನಕೆ ಮುದ ತಂದಿದೆ ಇನಿಯಾ
ಮುಚ್ಚಿರುವ ಮನದ ಗುಡಿಯ ಕದತೆರೆದಿದೆ ಇನಿಯಾ
ಅನುದಿನವು ನಿನ್ನ ಬಾಹುಬಂಧನದಲ್ಲಿ ಇರುವ ಆಶೆ
ಮೈ ಮನಸಿನಲಿ ಖುಷಿಯು ತುಂಬಿದೆ ಇನಿಯಾ
ಆತುರದಿ ಕಾಯುತ್ತಿದೆ ನಿನ್ನಾಗಮನಕಾಗಿ ತನುವು
ಒಂದಾಗಿರುವ ಬಯಕೆಯನು ಹೊಮ್ಮಿಸಿದೆ ಇನಿಯಾ
ತಂಪುಗಾಳಿಯು ಬೀಸಿ ಮನವ ಕೆರಳಿಸಿತು
ಒಲವರಸದಲಿ ಮೀಯಬೇಕೆನಿಸಿದೆ ಇನಿಯಾ
ಕನಸುಕಂಗಳ ತುಂಬಾ ತುಂಬಿಹುದು ನಿನ್ನ ರೂಪ
ಪಂಕಜಾಳ ಬಾಳಿನಲ್ಲಿ ಜೀವಸೆಲೆಯನು ಉಕ್ಕಿಸಿದೆ ಇನಿಯಾ
ಪಂಕಜಾ. ಕೆ.
Comments
Post a Comment