ಗಜಲ್
ಮಳೆ ಬಂದಾಗ ಹರಿವ ನೀರಿನಲಿ ಆಡುವಾಸೆ ಸಖಿ
ಹಕ್ಕಿಗಳಂತೆ ಬಾನಿನಲಿ ಹಾರಡುವಾಸೆ ಸಖಿ
ಜೀವನದಲ್ಲಿ ಮೇಲೆರಲು ಇರಬೇಕು ಬಾಳಿಗೆ ಗುರಿ
ಪ್ರಯತ್ನಪಟ್ಟರೆ ಫಲ ಸಿಗಬಹುದೆಂಬಾಸೆ ಸಖಿ
ಹೂವ ಜೇನನು ಸವಿಯಲು ಬರುತಿದೆ ದುಂಬಿಗಳು
ಮನಸಾರೆ ಒಮ್ಮೆ ಹೂತೋಟದಲಿ ಅಡ್ಡಾಡುವಾಸೆ ಸಖಿ
ಭಾವನೆಗಳ ಬೆನ್ನೇರಿ ಓಡಿಯಾಡಲು ಬಹುದೇ?
ಚೆಲುವಾದ ಕನಸುಗಳ ಕಟ್ಟಿ ನಲಿಯುವಾಸೆ ಸಖಿ
ಆತುರಪಟ್ಟು ಹೂವುಗಳನ್ನು ಕೀಳಬಾರದು
ಪಂಕಜಾಳ ಜತೆ ಪ್ರಪಂಚವೆಲ್ಲ ವಿಹರಿಸುವಾಸೆ ಸಖಿ
ಪಂಕಜಾ.ಕೆ.
Comments
Post a Comment