ಗಜಲ್.
ಹಸಿರು ಕಾನನದಿಂದ ತುಂಬಿದ ನಾಡು ನಮ್ಮದು
ತರುಲತೆಗಳು ತೂಗಿ ಬಾಗುವ ಬೀಡು ನಮ್ಮದು
ಪರ್ವತ ಶ್ರೇಣಿಗಳಿಂದ ತುಂಬಿದೆ ದೇಶದೆಲ್ಲೆಡೆ
ಪ್ರಾಕೃತಿಕ ಸಂಪತ್ತು ತುಂಬಿ ತುಳುಕುವ ಕಾಡು ನಮ್ಮದು
ಉಳಿಸಿ ಬೆಳೆಸಬೇಕು ನಾವು ಸಸ್ಯಸಂಕುಲಗಳ
ಬಾಳು ಬಂಗಾರವಾದೀತು ನೋಡು ನಮ್ಮದು
ಮಳೆ ಬಂದಾಗ ನೀರ ಹರಿವಿಗೆ ತಡೆಯುಂಟೆ ?
ಜುಳು ಜುಳು ಹರಿಯುವ ನದಿ ತೋಡು ನಮ್ಮದು
ಪಂಕಜಾಳಿಗೆ ಪ್ರಕೃತಿಯಲ್ಲಿ ವಿಹರಿಸುವುದೆಂದರೆ ಖುಷಿ
ವ್ಯಕ್ತ ಪಡಿಸುತ್ತಿದೆ ರಚಿಸಿದ ಹಾಡು ನಮ್ಮದು
ಪಂಕಜಾ.ಕೆ
Comments
Post a Comment