ಮುಂಗಾರು ಮಳೆ
ಹೊಸ ದಿನಕೆ ಹೊಸ ಕಿರಣದಲೆ
ಹರಡುತ ಬಂದಿಹನು ಹೊನ್ನ ತೇರಿನಲೆ
ಜಗವ ಬೆಳಗುವ ಆತುರ ಕಾತುರ
ಬೆಂಕಿ ಉಂಡೆಯಂತೆ ಸುಡುತಿಹನು ಭಾಸ್ಕರ
ಮುಂಗಾರು ಮಳೆಯ ಹನಿಗಳೆಲ್ಲಾ
ರವಿಕಿರಣ ತಾಪಕೆ ನಲುಗಿದವಲ್ಲಾ
ಜಡಿಮಳೆಯ ನೀರೀಕ್ಷೆಯಲಿ ಸೋತಿಹಳು
ಭೂತಾಯಿ ಒಡಲು ಬಿರಿದು ನಿಂತಿಹಳು
ಮಳೆಯ ಒಂದೊಂದು ಹನಿಯು ಮುತ್ತು
ಉಣಿಸು ಒಲವಿನ ಧಾರೆಯ ತುತ್ತು
ಮುಂಗಾರು ಮಳೆಯಲ್ಲಿ ಕುಡಿಯೊಡೆಯಲಿ
ಹಸಿರ ಚಾವಣಿ ಹಾಸಿ ಭೂತಾಯಿ ನಲಿಯಲಿ
ಎಲ್ಲೆಲ್ಲೂ ಹಸಿರು ಕಣ್ಣು ಮನ ತುಂಬಲಿ
ಮನೆ ಮನೆಯಲ್ಲೂ ಹರುಷ ತುಂಬಲಿ
ಪಂಕಜಾ.ಕೆ.
Comments
Post a Comment