ಮಳೆಯ ಹನಿ
ಬಾನಂಚಿನಲಿ ಹರಡಿರುವ ಮೋಡಗಳು
ಮಳೆಯ ಹನಿಗಳ ಮುತ್ತುಗಳ ಸುರಿಸಿ
ಇಳೆಯ ತಬ್ಬುತ ಸಂತೈಸಿತಂದು
ಭೂರಮೆಯು ನಳ ನಳಿಸಿ ಬಿರಿದರಳಿ
ಹಸಿರು ಹೂವು ಹಣ್ಣುಗಳ ತುಂಬಿ
ನಗುವ ಚಂದವ ಕಂಡು ಮನ ತುಂಬಿತಿಂದು
ಬಾನು ಸುರಿಸಿದ ಮುತ್ತಿನಾ ಹನಿಗಳು
ಮೈ ಮನಕೆ ಮುದಕೊಟ್ಟು ಬಿರಿದರಳಿದೆ
ಮೈ ತುಂಬ ಹೂಗಳರಳಿಸಿ ಕಂಪ ಸೂಸಿದೆ
ಹೂವ ಗಂಧವ ಎಲ್ಲೆಡೆಯೂ ಚೆಲ್ಲುತ
ಮಂದ ಮಾರುತ ಬರುತಿರಲು
ಮನಕೆ ಉಲ್ಲಾಸದ ಭಾವ ತುಂಬಿದೆ
ಅರಳಿ ನಗುವ ವಸುಂಧರೆಯ ಚೆಲುವಿನ ಬಲೆ
ಕವಿ ಮನದಲಿ ತುಂಬಿಸಿದೆ ಆನಂದದ ಅಲೆ
ಮನದಿ ಬಾನಂಗಳದ ಕಾಂತಿ ತುಂಬಿದೆ
ಪಂಕಜಾ.ಕೆ.
Comments
Post a Comment