ನನ್ನೊಲವೇ
ಹೇಗೆ ಬಂದೆ ಎಂದು ಬಂದೆ ಅರಿಯಲಾರೆನು l
ನನ್ನ ಮನದ ಗುಡಿಯಲ್ಲಿಂದು ನಿನ್ನ ಹೆಸರಿದೆ ll
ಪ್ರೀತಿ ಸೋನೆ ಮಳೆಯ ಹನಿಸಿ l
ಒಲವ ಸುಧೆಯ ಸುರಿಸುತ್ತಾ l
ಚೆಲುವ ನೀನು ಮನದ ಕದವ ತೆರೆಸಿ ಬಿಟ್ಟೆಯೋ?ll
ಅಲ್ಲಿ ಇಲ್ಲಿ ಓಡುತ್ತಿದ್ದ ಮನವ ಕದ್ದುl
ಅಕ್ಕರೆಯ ಸಕ್ಕರೆಯ ತಿನಿಸುತಲಿl
ನಲ್ಲ ನಿನ್ನ ರೂಪವನ್ನು ತುಂಬಿಬಿಟ್ಟೆಯೋ?ll
ಚೆಲುವ ತುಂಟ ನಗುವ ಬೀರಿ l
ಮಾಡಿಬಿಟ್ಟೆ ಏನು ಮೋಡಿl
ನನ್ನ ಮನವ ನಿನ್ನ ಕಡೆಗೆ ತಿರುಗಿಸಿಟ್ಟೆಯೊ?ll
ನಿನ್ನ ನಗುವ ಕಂಡು ಮನವುl
ತನ್ನ ತನವ ಮರೆಯಿತಿಂದುl
ನನ್ನೊಲವೆ ನಿನಗೆ ಇದನು ಹೇಗೆ ಹೇಳಲೊ?ll
ಪಂಕಜಾ.ಕೆ.
Comments
Post a Comment