ಗೋಮುಖ ವ್ಯಾಘ್ರ (ನ್ಯಾನೊ ಕಥೆ)
ಆತ ಬಡವರ ಬಂಧು ದೀನ ದಲಿತರ ಕಣ್ಮಣಿ ಎನ್ನುವ ಬಿರುದಾಂಕಿತನಾಗಿದ್ದ ತನ್ನ ತಂದೆ ತಾಯಿಯರ ನೆನಪಿಗಾಗಿ ಪ್ರತೀವರ್ಷ ಅನಾಥಾಶ್ರಮಗಳಿಗೆ ವೃದ್ಧಾಶ್ರಮಗಳಿಗೆ ಹಣ್ಣುಹಂಪಲು ಬಟ್ಟೆ ಸರಬರಾಜು ಮಾಡಿ ಫೋಟೋ ಕ್ಲಿಕ್ಕಿಸಿ ಹೆಮ್ಮೆ ಯಿಂದ ಹಾರ ತುರಾಯಿ ಹಾಕಿಸಿಕೊಂಡು ಬೀಗುತ್ತಿದ್ದ ತನ್ನ ಈ ಶ್ರೀಮಂತಿಕೆಯ ಜೀವನಕ್ಕೆ ಕಾರಣರಾದ ಆತನ ಹೆತ್ತವರು ಬೀದಿಯಲ್ಲಿ ಚಿಂದಿ ಆಯುವುದು ಕಂಡರೂ ಕಾಣದಂತೆ ತಿರುಗಾಡುತ್ತಿದ್ದ
ಪಂಕಜಾ.ಕೆ
Comments
Post a Comment