ವ್ಯವಸ್ಥೆ
ಮನುಜ ಮನುಜರ ನಡುವೆ
ಜಾತಿ ಬೀಜವ ಬಿತ್ತಿ
ತಮ್ಮ ಕಾರ್ಯ ಸಾಧಿಸುವರಯ್ಯ
ಕೈ ಕೈ ಬದಲಿಸುವ
ಹಣಕ್ಕೆಎಲ್ಲಿದೆ ಜಾತಿ
ನೀತಿ ಪಾಠವ ಹೇಳುತ
ಮಾಡುವರು ಜಾತಿ ಬೇಧ
ಕುಡಿಯುವ ನೀರಿಗಿಲ್ಲದ ಜಾತಿ
ಅನ್ನ ನೀರು ಗಾಳಿಗಿಲ್ಲದ ಜಾತಿ
ಬೇಕಿದೆಯೇ ಈ ಜಾತಿ ವ್ಯವಸ್ಥೆ?
ಉದ್ದುದ್ದ ಭಾಷಣ ವ ಬಿಗಿಯುತ್ತ
ಜಾತಿ ಪೋಷಣೆ ಮಾಡಿ
ಎಬ್ಬಿಸುವರು ದೊಡ್ಡ ಗೋಡೆ
ಎಲ್ಲರ ಮೈಯಲ್ಲಿ ಹರಿಯುವುದುಒಂದೇ ರಕ್ತ
ರಕ್ತ ಪಡೆಯುವ ಸಂಧರ್ಭದಲಿ
ಜಾತಿ ನೋಡುವರೇ?
ಪಂಕಜಾ.ಕೆ.
Comments
Post a Comment