ನಗೆ ಮಲ್ಲಿಗೆ
ನಗೆ ಮಲ್ಲಿಗೆ ಅರಳಿಸುತ
ನೀನಂದು ಬಂದೆ lಪl
ಮನದ ಬಯಲಲಿ
ನೀ ಬಂದು ನಿಂತೆ llಅಪll
ಚೆಲುವಾದ ಹೂವೊಂದು
ಅರಳಿರುವ ಭಾವl
ನಸು ನಗುವ ಮುಖದಲ್ಲಿ
ನಗೆಮುಗುಳು ಹೂವll
ಮನದಲ್ಲಿ ತುಂಬುತಿದೆ
ನಿನ್ನೊಲವೇ ನಲ್ಲೆl
ಕನಸಲ್ಲೂ ನೀ ಬಂದು
ಕಾಡುತ್ತಿರುವೆಯಲ್ಲೆ l
ಮಧುರಸವ ತುಂಬುತ್ತಾ
ನಗು ಮುಖವ ತೋರಿl
ಕನಸು ಮನಸಲ್ಲು
ನೀನೇ ಇರುವೆ ಚಕೋರಿll
ಬಾಳೆಲ್ಲ ಹಬ್ಬಿತು
ಚೆಲು ಹೂವ ಬಳ್ಳಿl
ಕನಸೆಲ್ಲ ನನಸಾಗಿ
ಮನಕದ್ದೆ ಕಳ್ಳಿll
ಹರಿಸಿಬಿಡು ಒಲವೆಂಬ
ಸವಿಜೇನ ಹೊನಲು l
ಬಾಳಲ್ಲಿ ತುಂಬಲಿ
ಸಂತಸದ ಅಮಲು ll
ಪಂಕಜಾ ಕೆ.
Comments
Post a Comment