ಮಳೆ ಇಳೆ (ಭಾವಗೀತೆ)
ಏಕೆ ಮುನಿದೆ ಹೇಳುವರುಣ ಇಂದು ನನ್ನಲಿ?l
ಸಾಕು ಸಾಕು ನಿನ್ನ ಕಾಟ ತಾಳಲಾರೆನುll
ನಲ್ಲೇ ನಿನ್ನ ಬಿಸಿಯುಸಿರು ನನಗೆ ತಟ್ಟಿತುl
ರವಿಕಿರಣದ ಬಿಸಿಗೆ ನೀನು ಸುಟ್ಟೆಯಲ್ಲವೇ?ll
ಬಿಡು ಬಿಡು ಇಷ್ಟು ದಿನ ಕಾಟ ಕೊಡುವುದೇ?l
ತನು ಮನವೆಲ್ಲ ಕೊಚ್ಚುತ್ತಿರುವುದು ಕಾಣದೆll
ಏನು ಮಾಡಲಿ ನಲ್ಲೇ ನಿನ್ನ ಮೈಯಲೇನಿದೆ?l
ಉಬ್ಬುತಗ್ಗು ಎಲ್ಲಾ ಅಳಿದು ನೆಲೆಯು ಎಲ್ಲಿದೆ?ll
ನಲ್ಲ ನಿನ್ನ ಒಲವ ಹನಿಯು ಜಾಸ್ತಿಯಾಗಿದೆl
ಮನೆ ಮಠ ಎಲ್ಲವಿಂದು ಕೊಚ್ಚಿ ಹೋಗಿದೆll
ಕಾಡು ಬೆಟ್ಟ ಇದ್ದರಲ್ಲೇ ನಾನು ಇಂಗಿ ಹೋಗುವೆl
ಕಾಡು ಕಡಿದು ನಾಡು ಮಾಡಿದ ಮನುಜ ತಿಳಿಯನೇ?ll
ತಿಳಿದಾನು ಇದನು ಅವನು ಇನ್ನು ಕ್ಷಮಿಸಿ ಬಿಡುವೆಯl
ಸಾಕು ಮಾಡು ನಿನ್ನ ಲೀಲೆ ಈಗ ಸದ್ಯಕೆll
ಪಂಕಜಾ.ಕೆ.
Comments
Post a Comment