ಗಜಲ್
ನಿನ್ನೊಡನಾಟವು ಮನಕೆ ಮುದ ತಂದಿದೆ ಇನಿಯಾ
ಮುಚ್ಚಿರುವ ಮನದ ಗುಡಿಯ ಕದತೆರೆದಿದೆ ಇನಿಯಾ
ನಿನ್ನ ಬಾಹುಬಂಧನದಲ್ಲಿ ಸದಾ ಇರುವ ಆಶೆ
ಮೈ ಮನಸಿನಲಿ ಖುಷಿಯು ತುಂಬಿದೆ ಇನಿಯಾ
ಆತುರದಿ ಕಾಯುತ್ತಿದೆ ನಿನ್ನಾಗಮನಕಾಗಿ ತನುವು
ಒಂದಾಗಿರುವ ಬಯಕೆಯ ಹೊಮ್ಮಿಸಿದೆ ಇನಿಯಾ
ತಂಪುಗಾಳಿಯು ಬೀಸಿ ಭಾವ ಕೆರಳಿಸಿತು
ಒಲವ ಕಡಲಲಿ ಮೀಯಬೇಕೆನಿಸಿದೆ ಇನಿಯಾ
ಕನಸುಕಂಗಳ ತುಂಬ ನಿನ್ನ ರೂಪ ತುಂಬಿಹುದು
ಪಂಕಜಾಳ ಬಾಳಿನಲ ಜೀವಸೆಲೆ ಉಕ್ಕಿಸಿದೆ ಇನಿಯಾ
ಪಂಕಜಾ. ಕೆ.
Comments
Post a Comment