ನಮನ
ವಿದ್ಯೆ ಬುದ್ದಿಗಳ ಕಲಿಸಿ
ಬಾಲ್ಯದಲ್ಲಿ ಕೈ ಹಿಡಿದು
ಅಕ್ಷರವ ತಿದ್ದಿಸಿದ ಓ ನನ್ನ
ಪ್ರೀತಿಯ ಅಮ್ಮ ಅಪ್ಪl
ನೀವೆನ್ನ ಮೊದಲ ಗುರು
ಸಲ್ಲಿಸುವೆ ನಿಮಗಿಂದು
ನನ್ನ ನಮನ ll
ಮನೆಯೇ ಮೊದಲ
ಪಾಠಶಾಲೆ ಎನ್ನುವ
ತತ್ವವ ಪಾಲಿಸಿl
ಕಲಿಸಿದಿರಂದು ನನಗೆ
ಒಳ್ಳೆ ವಿದ್ಯೆ ಬುದ್ದಿಗಳ
ಸಲ್ಲಿಸುವೆ ನಿಮಗಿದೋ
ನನ್ನ ಮೊದಲ ವಂದನೆll
ಅಕ್ಷರಗಳ ತಿದ್ದಿ ತೀಡಿ
ಜ್ಞಾನದ ದಾಹವ ಹೆಚ್ಚಿಸುತ
ಕಲಿಸಿದಿರಂದು l
ಉತ್ತಮಗುಣ ನಡತೆಗಳ
ಓ ನನ್ನಪ್ರೀತಿಯ ಶಿಕ್ಷಕ
ನಿಮಗಿದೋ ನನ್ನ ವಂದನೆll
ಅನುದಿನವು ಹಲವು
ವಿಷಯಗಳ ತಿಳಿಸುತ್ತಾ
ಜ್ಞಾನದ ಹಸಿವನ್ನು
ತಣಿಸುತ್ತಾ ಇರುವ
ಗೂಗಲ್ ಅಜ್ಜನೇ l
ಇಂದೀಗ ನನ್ನ ಶಿಕ್ಷಕ
ನಿನಗಿದೋ ನನ್ನ ನಮll
😀😀
ಪಂಕಜಾ.ಕೆ.
Comments
Post a Comment