ಗಜಲ್.
ನಿನ್ನ ಮೋಹಕ ಕಾಂತಿಗೆ ಮರುಳಾದೆ ನಲ್ಲ
ಕಣ್ಣ ನೋಟದ ಸೂಜಿಗಲ್ಲಿಗೆ ಬಲಿಯಾದೆ ನಲ್ಲ
ಪ್ರೇಮವೆಂಬುದು ಹಾಗೆ ಮನಕೆ ಮುದವು
ತುಂಟ ಕಣ್ಣಿನ ನೋಟಕೆ ಸೆರೆಯಾದೆ ನಲ್ಲ
ಮೀಸೆಯಡಿಯ ನಗುವಿನಲಿದೆ ಏನೋಸೆಳೆತ
ಭಾವನೆಗಳ ಕಡಲಲಿ ಮುಳುಗಿಸಿದೆ ನಲ್ಲ
ಒಲವ ಜೇನನು ಹರಿಸುವೆಯೆಂದು ಕಾದೆ
ನನ್ನೊಡಲ ಬೇಗುದಿಯ ತಣಿಸಬಾರದೆ ನಲ್ಲ
ನೀ ಮುಡಿಸಿದ ಮಲ್ಲಿಗೆ ಯಲಿದೆ ಘಮಲು
ಮನಸು ಅಮಲಿನಲಿ ತೇಲುತಿದೆ ನಲ್ಲ
ಪಂಕಜಾ ಳ ಮನದಲೆಲ್ಲಾ ನಿನ್ನದೇ ರೂಪ
ಸವಿ ನೆನಪುಗಳನು ಮೆಲುಕು ಹಾಕುತಿದೆ ನಲ್ಲ
ಪಂಕಜಾ.ಕೆ
Comments
Post a Comment