ಕ್ಷಮಿಸುವೆಯಾ?
ನಮ್ಮಿಬ್ಬರಲಿತ್ತು ಒಲವು
ಕಳೆಯಿತು ದಿನ ಹಲವು
ಒಲವ ಸುರಿಸುವಲ್ಲಿಯೂ
ನೀ ಕಾಯ್ದೆಯೇಕೆ ಅಂತರ?
ಅಂತರವು ನಮ್ಮಿಬ್ಬರನು
ಅಂದು ಬೇರ್ಪಡಿಸಿತೇ?
ಮನದ ಮಾತುಗಳೆಲ್ಲ
ಬರಿದಾಗಿ ಹೋಯಿತೆ?
ಅಂದು ನೀನಿಟ್ಟ ಅಂತರ
ನನ್ನೊಳಗೆ ತಂತು ಮತ್ಸರ
ಕೆಣಕಿತೇನೋ ನನ್ನ ಸ್ವಾಭಿಮಾನವ?
ಬಿರುಕು ಬಿಟ್ಟಿತು ಸ್ನೇಹ ಅನಂತರ
ಅಂತರದ ಗುಟ್ಟು ತಿಳಿದಾಗ
ಇಳಿಯಿತು ನನ್ನ ಗತ್ತು
ಆದರೇನು ನೀನಾದೆ
ಆಗ .ಪರರ ಸೊತ್ತು
ವಿರಹದ ಉರಿಯಲ್ಲಿ
ಬೇಯುತಿಹೆ ನಾನು
ನಿನ್ನ ನೋಯಿಸಿದೆ ಅಂದು
ಕ್ಷಮಿಸುವೆಯ ಗೆಳತಿ ?
ಪಂಕಜಾ.ಕೆ.
Comments
Post a Comment