ಒಡನಾಟ
ಪ್ರಜ್ವಲಿಪ ದೀಪದ
ಜತೆಯಲ್ಲಿ ಸಾಗಿ
ಪಡೆದೆ ನಾನಿಂದು
ಕವಿ ಕವಯಿತ್ರಿಯರ
ಒಡನಾಟದ ಬಾಗ್ಯ
ಕಳೆದ ಮಧುರ ಕ್ಷಣಗಳ
ನೆನಪು ಮರೆಯಲಾರದ
ಸವಿ ಸವಿ ನೆನಪು
ಸಜ್ಜನರ ಒಡನಾಟ
ಹೆಜ್ಜೇನು ಸವಿದಂತೆ
ಗಾದೆ ಮಾತಿದು ಸುಳ್ಳಲ್ಲ
ಎನ್ನುವ ಸತ್ಯವ ಕಂಡೆನಿಂದು
ಕ್ಷಣ ಕ್ಷಣಕೂ ಅನಂದದಿ
ಬಿರಿಯುತ್ತಿದೆ ಹೃದಯ
ಎನಿತು ಭಾಗ್ಯವೋ ಕಾಣೆ
ನಿಮ್ಮೆಲ್ಲರ ಒಡನಾಟದ
ಹೆಜ್ಜೇನು ಸವಿದು
ಕೃತಾರ್ಥಳಾದೆ ನಿಂದು
ಪ್ರೀತಿ ವಿಶ್ವಾಸ ತುಂಬಿದ
ಹೃದಯಗಳ ಒಡನಾಟ
ಹಿಗ್ಗಿ ಹೂವಾದ ಹೃದಯ
ಸುರಿಸಿತು ಆನಂದ ಭಾಷ್ಪ
ನಮಿಸುವೆ ನಿಮಗೆ
ಕವಿ ಬಾಂದವರೆ
ಸ್ಥಿರವಾಗಿರಲಿ ಈ ನಿಮ್ಮ
ಪ್ರೀತಿಯ ಬಂದ
ಹಸಿರಾಗಿರಲಿ ನಮ್ಮ
ಈ ಬಾಂಧವ್ಯ
ಪಂಕಜಾ.ಕೆ.
Comments
Post a Comment