[05/10, 2:37 PM] ಪದ್ಯಾಣ ಗೋವಿಂದ ಭಟ್: ಪಂಕಜಾ.ಕೆ. ಅವರ
ಬಾಳದೋಣಿ
ಭಾವಗೀತೆ ಕುರಿತು
____________________
ಗೀತೆಯಲ್ಲಿ ಭಾವ ಹತಾಶೆಯ ರೂಪದಲ್ಲಿ ಬಿಂಬಿತವಾಗಿದೆ.ಆರ್ದ್ರತೆಯಿದೆ,ಪ್ರಾರ್ಥನೆಯಿದೆ.ಬದುಕಿನಲ್ಲಿ ಸೋಲು,ನೋವುಗಳನ್ನುಂಡು ಜೀವ ಹಣ್ಣಾಗಿ ದೇವನ ಮೊರೆ ಹೋಗಿದೆ.
ಬಲ ತುಂಬುವುದಕ್ಕಾಗಿ ವಂದನೆಯ ಉಪಚಾರ ದೇವನಿಗೆ! ನಂಬುಗೆಯ,ವಿಶ್ವಾಸದ ನೆಲೆಯಲ್ಲಿ ಪ್ರಾರ್ಥನೆ ಸಲ್ಲಿಕೆಯಾಗಿದೆ.ಖಂಡಿತ ಬಯಕೆ ನೆರವೇರಲಿ!
ಒಳ್ಳೆ ಭಾವ ಗೀತೆ.ಹಾಡುವಂತೆಯೂ ಇದೆ.
[05/10, 2:42 PM] ಅನುರಾದ ಉಬರಡ್ಕ ಹವ್ಯ ಕಾವ್ಯ: ಪಂಕಜಾ ಅವರ ಬಾಳದೋಣಿ ಭಾವಗೀತೆ ಸುಲಭವಾಗಿ ಹಾಡಬಹುದಾದಂತೆ ಇದೆ. ಕಷ್ಟ ಕಾರ್ಪಣ್ಯ ಗಳಿಗೆಷ್ಟೇ ಎದೆ ಒಡ್ಡಿದರೂ ಕಟ್ಟಕಡೆಗೆ ಆ ದೇವರಲ್ಲಿ ಶಾಂತಿ ಸಮಾಧಾನಕ್ಕಾಗಿ ಶರಣಾಗತಿ ಹೊಂದುವ ಭಾವ ಕವನದಲ್ಲಿ ವ್ಯಕ್ತವಾಯಿತು. ಚಂದದ ಭಾವಯಾನ
[05/10, 2:42 PM] ಪರಿಮಳ ಅಡ್ವೊಕೇಟ್: *ಬಾಳದೋಣಿಯ ನಾವಿಕಳು ಪಂಕಜ*
ಕಂಡ ಕನಸುಗಳು ನನಸಾಗಲಾರದೇ ಕರಗಿಹೋಗುತ್ತಿವೆ, ಒಡಲು ಒಡೆದಿದೆ. ನೋವೆಂಬುದೇ ಭಾಗ್ಯದಲಿ ಉಳಿದಿದೆ. ಬದುಕಿನ ನಡೆಯು ಬರೀ ಮುಳ್ಳುಹಾದಿಯಾಗಿ ಮುಂದಡಿಯಿಡಲಾರದೇ ಕುಸಿಯುತಿರುವೆ. ಒಂದಷ್ಟು ಸಮಯಗಳು ಕಳೆದು ಹೋಗಿದೆ. ಈಗ ಮೊದಲಿನ ಉತ್ಸಾಹವೂ ಉಳಿದಿಲ್ಲ ಬಾಗಿದ ಬೆನ್ನುಮೂಳೆಯದು ಸೊರಗಿದೆ. ಜೀವ ಮರುಗಿದೆ. ಏನನ್ನೂ ಸಾಧಿಸಲಾರದೆ ಜೀವನೋತ್ಸಾಹ ಕಳೆದುಕೊಂಡ ನಿರಾಶಾಭಾವ. ಜೊತೆಯಲ್ಲೇ ಮುಂದೆಂದಾದರೂ ಒಳಿತಾಗಬಹುದೆಂಬ ಸಣ್ಣ ಆಶಾಭಾವನೆಯೂ ಕಾಣಿಸುತ್ತಿದೆ. ಅದಕಾಗಿಯೇ ದೇವರ ಮೊರೆಹೋಗಿರುವುದು. ಆ ಮನಸ್ಸು ಏಕಾಗ್ರತೆಯನ್ನು ಪಡೆಯಲಿ. ದೇವನೆಂದ ಪರಂ ತತ್ವದಲಿ ನೆಲೆದಲಿ ಎನ್ನುವ ಭಾವ.
ಚಂದಿರ ಕಾರಿರುಳ ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...
Comments
Post a Comment