ಗಜಲ್
ನಿನ್ನ ಸುಮಧುರ ಗಾನದಲಿ ಮೈಮರೆಸಿದೆ ನಲ್ಲ
ಕೋಗಿಲೆಯಇಂಪಾದ ದನಿಯಂತೆ ಕೇಳಿಸಿದೆ ನಲ್ಲ
ಸಂಗೀತವು ಮನದ ಬೇಸರ ಕಳೆಯುವ ಸಾಧನ
ಮದುರಾನುಭೂತಿಯಲಿ ನನ್ನ ತೇಲಿಸಿದೆ ನಲ್ಲ
ಗಾನಸುಧೆಯಲಿ ಅದೆಂತ ಅಮಲು
ಮನಕೆ ಸಂತಸವ ತುಂಬಿಸಿದೆ ನಲ್ಲ
ತಾಳವಿಲ್ಲದ ಗಾಯನ ಕರ್ಣಕಠೋರ
ಧ್ವನಿಯ ಮಾಧುರ್ಯ ಮರುಳಾಗಿಸಿದೆ ನಲ್ಲ
ಸರಸ್ವತಿಯು ಒಲಿದರೆ ಎಲ್ಲವೂ ಸಾಧ್ಯ
ಹಾಡಲು ಕಲಿಯ ಬೇಕೆನಿಸಿದೆ ನಲ್ಲ
ಗಾಯಕರಿಗೆ ಸಿಗುತಿದೆ ಮಾನ ಸನ್ಮಾನ
ರಾಗದಲೆಗಳಲಿ ಮುಳುಗಿಸಿದೆ ನಲ್ಲ
ಪಂಕಜಾಳ ಸಾನ್ನಿಧ್ಯವಿರಲು ಮನಕೆ ಉಲ್ಲಾಸ
ಹಾಡುಹಕ್ಕಿಯಂತೆ ಇರಲು ಬಯಸಿದೆ ನಲ್ಲ
ಪಂಕಜಾ.ಕೆ.
Comments
Post a Comment