ಕೂಡಿ ಬಾಳಬೇಕು
ಮನೆಯೆಂದ ಮೇಲೆ ಜನರಿರಬೇಕು
ಜನರಿದ್ದಲ್ಲಿ ಭಿನ್ನಾಭಿಪ್ರಾಯ ಸಹಜವಲ್ಲವೇ?
ಒಂದೇ ತಾಯಿಯ ಮಕ್ಕಳಲ್ಲೂ ಇದೆ
ಕೈಯ ಬೆರಳುಗಳಂತೆ ಭಾವ ವ್ಯತ್ಯಾಸ
ತಿಳಿದು ನಡೆಯಲು ಬೇಕು
ಒಡೆಯದಂತೆ ಮನೆಯ ನಡೆಸಬೇಕು
ಸಾಂತ್ವನವ ಕೊಟ್ಟು ಪಡೆಯುತ
ಮನೆ ಮಂದಿಯ ಜತೆ ಕೂಡಿ ಬಾಳಬೇಕು
ಎಲ್ಲರೊಡನೆ ನಗುತ ನಗಿಸುತ
ಬಾಳಿ ಜೀವನ ಸಾರ್ಥಕ್ಯ ಪಡೆಯಬೇಕು
ಸಾಂತ್ವನಿಸುವ ಕೈಗಳಿರಲು
ಕಷ್ಟ ಸುಖಗಳ ದೋಣಿ ಸರಾಗ ಹರಿದೀತು
ಇದನರಿತರೆ ಬಾಳು ಬಂಗಾರವಾದೀತು
ಸುಖ ಶಾಂತಿ ನೆಮ್ಮದಿಯ ತವರಾದೀತು
ಪಂಕಜಾ.ಕೆ
Comments
Post a Comment