ಅಂತರ
ನನ್ನ ನಿನ್ನ ನಡುವೆ ಆಕಾಶ
ಭೂಮಿಯಷ್ಟು ಅಂತರ
ಎಂದು ಸೃಷ್ಟಿಯಾಯಿತೋ ಈ ಅಂತರ
ಪರಿಹಾರ ಕಾಣದೆ ಬಳಲಿರುವೆ ನಲ್ಲ
ದಾರಿಕಾಣದೆ ಪರದಾಡುತಿರುವೆ
ಬಿಡಿಸಲಾರದೆ ಈ ಅಂತರದ ಕಗ್ಗಂಟು
ನಾ ಮಾಡಿದ ತಪ್ಪೇನು ಹೇಳು ನಲ್ಲ
ತಿಳಿಯದೆ ನೋಯುತಿರುವೆ ನಿರಂತರ
ನೀ ದೂರಹೋದರೆ ನಾ ಬಾಳಲಾರೆ
ಅಂತರವ ಸರಿಸುತ್ತ ಮನವ ತಣಿಸು
ನನ್ನ ನಿನ್ನೊಳಗೆ ಬೇಡ ಈ ಹಮ್ಮು ಬಿಮ್ಮು
ಇರಲಿ ಎಂದೆಂದೂ ಪ್ರೀತಿ ಒಲವು
ಒಮ್ಮೆ ನೀ ಬಳಿಗೆ ಬಂದು ನಕ್ಕು ಬಿಡು
ಈ ಹೃದಯ ನಿನಗಾಗಿ ಮಿಡಿಯುತ್ತಿದೆ
ಅಂತರಂಗವ ತೆರೆದಿಟ್ಟು ಕಾದಿರುವೆ
ಹೇಗಿದ್ದವಳು ಹೇಗಾದೆ ಎಲ್ಲವೂ ನಿನಗಾಗಿ
ಹೃದಯದ ದನಿ ಕೇಳದೆ ನಿನಗೆ
ಯಾಕೆ ದೂರವಾದೆ ಹೇಳು ನೀ ಪ್ರಿಯ
ಇನ್ನಾದರೂ ಸರಿಯಲಿ ನನ್ನ ನಿನ್ನ
ಈ ಮುಸುಕಿನೊಳಗಿನ ಗುದ್ದಾಟ
ಆಗಿದ್ದೇ ಸಾಕು ಬಿಡು ನಿನ್ನ ಕೋಪ ತಾಪವ
ಯಾರಿಗೂ ಸುಖವಿಲ್ಲ ಈ ಮೌನ ಯುದ್ಧ
ಸಾಕಿನ್ನು ನಿತ್ಯ ಈ ಮೌನ ಹೋರಾಟ
ಸವೆಯಬೇಕಿದೆ ಬಾಳ ದಾರಿ ಇನ್ನು ಬಹುದೂರ
ಒಂಟಿ ಪಯಣವಿದು ಮನಕೆ ಬಲು ಕಷ್ಟ
ಇದ್ದಾಗ ಕೋಪತಾಪದಿ ಸುಡಲೇಕೆ ಬಾಳು
ನಲುಗೀತು ನೋಡು ನಮ್ಮ ಪ್ರೀತಿಯ ಹೂವು
ಪ್ರೀತಿ ತುಂಬಿದ ಮನವವಿರಲು
ನಗುನಗುತಿರಲೇನಿದೆ ಖರ್ಚು
ಸರಿಸು ಬಾ ನನ್ನ ನಿನ್ನ ನಡುವಿನ ಈ ಅಂತರ
ಪಂಕಜಾ ಕೆ
Comments
Post a Comment