ಬದುಕು
ನೂರು ಸಂಘರ್ಷಗಳ ನಡುವೆ
ಎತ್ತ ಸಾಗಬೇಕೆನ್ನುವುದ ತಿಳಿಯದೆ
ಬರಿದೆ ಸಾಗುತಿದೆ ಜೀವನ
ನಾನು ನನ್ನದೆನ್ನುವ ಅಹಂಕಾರ
ಮೋಹ ಮದ ಮತ್ಸರಗಳ ಹಾರ
ತುಂಬಿ ತುಳುಕಿ ಬರಡಾಗುತಿದೆ ಜೀವನ
ನೆರೆಯವನನ್ನೂ ನಂಬಲಾಗದ ಸ್ಥಿತಿ
ಒಬ್ಬರ ಏಳ್ಗೆಯನು ಸಹಿಸದ ಮನೋಸ್ಥಿತಿ
ಪ್ರೀತಿವಿಶ್ವಾಸಕ್ಕೆ ಬೆಲೆಯಿಲ್ಲದಾ ಗತಿ
ಮನುಷ್ಯ ಮನುಷ್ಯರ ನಡುವೆ ಕಂದಕ
ಮಮಕಾರದ ಸವಿಯ ತಿಳಿಯಲಾರದ ಜನ
ಕಾಲನಕರೆ ಬಂದಾಗಳಷ್ಟೇ ತಪ್ಪುಒಪ್ಪುಗಳ ಪರಿವೀಕ್ಷಣ
ಮುಖವಾಡದ ಬದುಕಿನಲಿ ನಲುಗುತಿದೆ
ಭಾವನೆಗಳಿಲ್ಲದೆ ಬಾಳು ಬರಡಾಗುತಿದೆ
ಪ್ರೀತಿ ವಿಶ್ವಾಸವಿಲ್ಲದೆ ಬದುಕು ಕೊರಡಾಗುತಿದೆ
ಪಂಕಜಾ.ಕೆ
Comments
Post a Comment