ನಮೋ ದುರ್ಗೆ (ಭಕ್ತಿಗೀತೆ)
ನವರಾತ್ರಿಯು ಬಂತಮ್ಮ
ನವದಿನಗಳು ನಿನಗೆ ಮುಡಿಪಮ್ಮ
ನವದುರ್ಗೆಯೇ ಬಾರಮ್ಮ
ನಮಿಸುವೆ ನಿನಗೆ ನೋಡಮ್ಮ
ಅಭಯ ಹಸ್ತವ ತೋರಮ್ಮ
ಅನುದಿನ ನಮ್ಮನು ಪೊರೆಯಮ್ಮ
ಅರ್ಚನೆ ಮಾಡುವೆ ಒಲಿಯಮ್ಮ
ಆರತಿ ಬೆಳಗುವೆ ಕರುಣಿಸಮ್ಮ
ನಿನ್ನನೇ ನಂಬಿರುವೆ ದುರ್ಗಮ್ಮ
ನೀನೇ ಗತಿಯೆನಗೆ ಕಾಯಮ್ಮ
ನಾನು. ಎಂಬುದ ಕಳೆಯಮ್ಮ
ನಿನ್ನಲ್ಲೇ ಶರಣು ಬಂದಿಹೆ ನೋಡಮ್ಮ
ಅರಸಿನ ಕುಂಕುಮ ಅರ್ಪಿಸುವೆನಮ್ಮ
ಆಯುರಾರೋಗ್ಯಗಳ ಕೊಡು ಅಮ್ಮ
ಅನಂದದಿ ಇರಲು ಹರಸಮ್ಮ
ಅಗಣಿತ ಮಹಿಮಳು ನೀನಮ್ಮ
ಭಕ್ತಿಯಲಿ ನಿನಗೆ ಪೊಡಮಡುವೆ
ಬೇಗನೆ ಬಂದೆನ್ನ ಹರಸು ದುರ್ಗಮ್ಮ
ಬೇಡಿದ ವರಗಳ ಕೊಡು ಅಮ್ಮ
ಬಾರೇ ಬೇಗನೆ ನನ್ನಮ್ಮ
ಪಂಕಜಾ ಕೆ
Comments
Post a Comment