ಬಾಳ. ದೋಣಿ
ಒಡಲು ಬಿರಿದಿದೆ
ಕನಸು ಕರಗಿದೆ
ಮನಸು ನೋವಲಿ ಮಿಡಿದಿದೆ
ಬಾಳ ಬಯಲಲಿ
ಮುಳ್ಳು ಹರಡಿದೆ
ಬದುಕು ಬಾರವಾಗಿದೆ
ಬಾಳ ತೇರನು
ಎಳೆಯಲಾರದೆ
ಬೆನ್ನು ಮೂಳೆಯು ಬಾಗಿದೆ
ದೇವ ಕರುಣೆಯ ತೋರಿ
ಕಳೆದುದೆಲ್ಲವ ಮರಳಿಸು
ಬಾಳ ದೋಣಿಯ ತೇಲಿಸು
ನಿತ್ಯ ವಂದನೆ ಸಲಿಸುತ
ಮನವು ನಿನ್ನಲೇ ನೆಲೆಸಿದೆ
ತನುವು ಕರುಣೆಯ ಕೋರಿದೆ
ನನ್ನದೆಲ್ಲವು ನಿನ್ನದೆನುತ
ನಾನು ಎಂಬುದ ಮರೆತಿದೆ
ಮನಸು ಶಾಂತಿಯ ಬಯಸಿದೆ
ಪಂಕಜಾ ಕೆ
Comments
Post a Comment