ಹೆಣ್ಣು
ಹೆಣ್ಣೆಂದು ಜರೆಯುವರು
ಹೆಣ್ಣೊಂದು ಹುಟ್ಟಿದರೆ ತಿಳಿಯುವರು ಹುಣ್ಣೆ0ದು
ಹೆಣ್ಣು ಹೆತ್ತವರ ಕಣ್ಣಲ್ಲಿ ಸುರಿಸುವರು ಕಣ್ಣೀರು
ಹೆತ್ತವಳು ಹೊತ್ತವಳು ಪ್ರೀತಿಯಿಂದ ಸಲಹಿದವಳು
ಅತ್ತಾಗ ತಾ ಅತ್ತು ನಕ್ಕಾಗ ತಾ ನಗುತ
ಕಂದನ ಏಳ್ಗೆಯಲಿ ಕಣ್ಣಾದವಳು ಹೆಣ್ಣಲ್ಲವೇ?
ನಗು ನಗುತ ಸಂಸಾರದ ಭಾರವನು ತಾ ಹೊತ್ತು
ನಲ್ಲನಿಗೆ ಸಿಹಿ ಮುತ್ತ ಹಂಚಿ ನೋವ ನುಂಗುತ
ಬದುಕಿದವಳು ಹೆಣ್ಣಲ್ಲವೇ?
ಪಂಕಜಾ.ಕೆ
Comments
Post a Comment