ಪ್ರಶ್ನೆಯಾಗಿದೆ
ಮನೆಯ ಮಾಡಿನಲಿ
ಪುಟ್ಟ ಗೂಡನು ಕಟ್ಟಿ
ಚಿಲಿ ಪಿಲಿ ಗಾನವ ಹಾಡುತ್ರ
ನಲಿದಾಡುತ್ತಿದ್ದ ಪುಟ್ಟ ಹಕ್ಕಿಗಳೆಲ್ಲಿ?
ಜುಳು ಜುಳು ಹರಿಯುವ ನದಿ
ಬೆಟ್ಟ ಗುಡ್ಡಗಳಲ್ಲಿ ತುಂಬಿದ ಹಸಿರು
ಸ್ವಚ್ಛಂದ ವಾಗಿ ಸಂಚರಿಸುತ್ತಿದ್ದ
ಬಗೆಬಗೆಯ ಪ್ರಾಣಿಗಳೆಲ್ಲಿ?
ಬತ್ತಿದೆ ಊರ ಬಾವಿಯ ನೀರು
ಅಂತರ್ಜಲ ವನು ಕೊರೆದರೂ
ಸಿಗಲಾರದ ಸಿಹಿ ನೀರು
ಮಾನವನ ದುರಾಶೆಗೆ ಪ್ರಕೃತಿ ನಾಶ
ಉತ್ತರವ ಹುಡುಕುತ್ತ
ಅಲೆಯುತಿದೆ ಮನಸು
ಪ್ರಕೃತಿ ಸಿರಿಯಲ್ಲಿ ಕಳೆದು
ಉಲ್ಲಾಸವ ತುಂಬುವ ಬಯಕೆ
ಬೇಯುತ್ತಿದೆ ಮೈ ಮನಗಳು
ಪ್ರಕೃತಿ ನಾಶದ ಬಗ್ಗೆ
ಅಳಿಯುತ್ತಿದೆ ಪ್ರಾಣಿ ಪಕ್ಷಿ ಸಂಕುಲ
ಪ್ರಕೃತಿ ಮುನಿದರೆ ಇರಬಲ್ಲೆವೇ ನಾವು?
ಯಾರೊಡನೆ ಹೇಳಲಿ ನನ್ನ ಈಅಳಲು
ಕಾಯುವವನೆ ಕೊಲುವಂತಾದಾಗ
ರಕ್ಷಣೆಗೆ ಯಾರಿಹರು
ಉತ್ತರವೇ ಸಿಗದ ಪ್ರಶ್ನೆಗಳಿವು
ಪಂಕಜಾ.ಕೆ
Comments
Post a Comment