ನನ್ನೊಲವೇ ನೀನು
ನನ್ನೆದೆಯ ಬಾಂದಳದಿ
ನಗೆ ಹೂವ ಹನಿಸುತ್ತ
ಸುಗಂಧ ಬೀರುವ ಕುಸುಮ ನೀನು
ನಿನ್ನ ಒಡನಾಟದಲಿ
ನವಿಲ ನರ್ತನದ ಬಾವ
ತನು ಮನವ ಸೆಳೆವ ಸೊಬಗಿ ನೀನು
ಬಾಳ ದೋಣಿಯ ಏರಿ
ನೀ ಬಂದ ಆ ಹೊತ್ತು
ಒಲವ ಪಯಣಕೆ ಜತೆಯಾದೆ ನೀನು
ಸವಿಯಾದ ಕನಸಿಂದು
ಮೈ ಮನಕೆ ಪುಳಕ
ಕನಸನೂರಿನ ಮುದ್ದು ಚೆಲುವೆ ನೀನು
ನನ್ನೊಲವೆ ನೀನಿರಲು
ಮನದಲೇನೋ ಹರ್ಷ
ಬಾಳಲ್ಲಿ ಚೆಲು ಬಣ್ಣ ತುಂಬಿದೆ ನೀನು
ಪಂಕಜಾ ಕೆ.
Comments
Post a Comment