ವೀರಯೋಧ (ಮಕ್ಕಳ ಕವನ)
ದೇಶಕಾಗಿ ದುಡಿಯುತ್ತಿರುವ ವೀರಯೋಧರು
ತಮ್ಮ ಪ್ರಾಣ ಒತ್ತೆಯಿಟ್ಟು ನಮ್ಮ ಕಾಯುವರು
ವೈರಿಗಳು ನುಸುಳದಂತೆ ಕೋಟೆ ಕಟ್ಟುವರು
ರಾತ್ರಿ ಹಗಲು ದೇಶ ಕಾಯುವ ದೇಶಭಕ್ತರು
ಚಳಿ ಮಳೆ ಗಾಳಿಗೆಲ್ಲ ಬೆಚ್ಚಲಾರರು
ಕ್ಷಾತ್ರತೇಜ ಮೆರೆಯುತ್ತಿರುವ ವೀರಸೂರರು
ಶಿಸ್ತು ಸಂಯಮದಿಂದ ಬಾಳುವ ಇವರು ಧನ್ಯರು
ವೀರತೇಜ ಹೊಮ್ಮುತ್ತಿರುವ ವೀರ ಪುತ್ರರು
ತಾಯಿ ಭಾರತಿಯ ಸೇವೆಯಲ್ಲಿ ಎಂತ ಸುಖವಿದೆ
ಮಡಿಲ ಅಪ್ಪುಗೆಯಲಿರಲು ಏನು ಸೊಗಸಿದೆ
ದೇಶ ಸೇವೆ ಮಾಡುತ್ತಿರುವ ತೃಪ್ತಿ ಮನದಲಿ
ಆತ್ಮವಿಶ್ವಾಸ ತುಂಬಿ ಬಾಳುತಿರುವ ನಮ್ಮ ಯೋಧರು
ಇವರ ತ್ಯಾಗ ಬಲಿದಾನಗಳು ನಮ್ಮ ಕಾಯುವುದು
ಇವರಂತೆ ಬೆಳೆದು ನಾವು ತಾಯ ಕಾಯುವೆವು
ವೈರಿಗಳ ಸದೆಬಡಿದು ಭಾರತಾಂಬೆಯ ಸೇವೆಗೈವೆವು
ಭಾರತಿಯರೆಂಬ ಹೆಮ್ಮೆ ಪಡುವ ನಾವು ಚಿಣ್ಣರು
ಪಂಕಜಾ.ಕೆ.
Comments
Post a Comment