ಗಜಲ್ (ಮೌನ ದಬಗ್ಗೆ)
ನಿನ್ನ ಮೌನವು ನನ್ನ ಕೆಣಕುತಿದೆ ಗೆಳತಿ
ಮಾತನಾಡಲು ವಿಷಯ ಸಿಗದಾಗಿದೆ ಗೆಳತಿ
ಕೋಪ ತಾಪದಿ ಬಾಳು ನಲುಗಬೇಕೇ?
ನಾನೊಮ್ಮೆ ನಿನ್ನನ್ನು ಕಾಣಬೇಕಿದೆ ಗೆಳತಿ
ನಮ್ಮ ಜೀವನವು ಶಾಶ್ವತವೇ ಹೇಳು?
ಇರುವಷ್ಟು ದಿನ ನಗು ನಗುತಿರಬೇಕಿದೆ ಗೆಳತಿ
ಕಷ್ಟ ಬಂತೆಂದು ಕೊರಗಿದರೆ ಆದೀತೆ?
ಸುಖದ ದಿನಗಳು ಬರುತಿದೆ ಗೆಳತಿ
ಬಾಳ ಪಯಣದಲಿ ನಾವು ಜತೆಯಾಗಿರಬೇಡವೇ?
ಹೊಂದಿಕೊಂಡು ನಾವಿರಬೇಕಿದೆ ಗೆಳತಿ
ನೀ ನಕ್ಕರೆ ಬಾಳು ಸಕ್ಕರೆ ಯಾಗದೇ?
ಮುಖವಾಡವ ಕಳಚಬೇಕಿದೆ ಗೆಳತಿ
ಮನವು ಹೂವಿನಂತೆ ಮೃದುವಾಗಿದೆಯಲ್ಲವೇ ಪಂಕಜಾ?
ನೋಯಿಸಿದರೆ ಬೇಸರವಾಗದೆ ಗೆಳತಿ
ಪಂಕಜಾ.ಕೆ
Comments
Post a Comment